ಬಿಡಿಎಫ್‌ಎ: ಮಾಘೇಶ್ವರನ್ ಅಧ್ಯಕ್ಷ ಬೆಂಗಳೂರು: ಬಾಲು ಮಾಡರ್ನ್ ಬಾಯ್ಸ್ ಎಫ್‌ಸಿಯ ಎಸ್. ಮಾಘೇಶ್ವರನ್ ಅವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್‌ (ಬಿಡಿಎಫ್‌ಎ) ಇದರ 2023–27ನೇ ವರ್ಷಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಸೋಸಿಯೇಷನ್‌ಗೆ ಪದಾಧಿಕಾರಿಗಳ ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರ ಆಯ್ಕೆ ಭಾನುವಾರ ನಡೆಯಿತು. ಉಪಾಧ್ಯಕ್ಷರಾಗಿ ಆರ್. ಶಂಕರ್ (ಯಂಗ್ ಜೆಮ್ಸ್ ಎಫ್‌ಸಿ), ಕಾರ್ಯದರ್ಶಿಯಾಗಿ ಎಂ.ಶ್ರೀಧರನ್‌ (ನ್ಯಾಷನಲ್ಸ್ ಎಫ್‌ಸಿ), ಕೋಶಾಧಿಕಾರಿಯಾಗಿ ಜೆ. ಸಂತೋಷ್ ಕುಮಾರ್ (ವೆಟರನ್ಸ್ ಎಫ್‌ಸಿ) ಆಯ್ಕೆಯಾದರು. ವ್ಯವಸ್ಥಾಪಕ ಸಮಿತಿ ಸದಸ್ಯರು: ಚಿಕ್ಕಚೆನ್ನಯ್ಯ (ಎಕ್ಸೆಲ್ಸಿಯರ್ ಎಫ್‌ಸಿ), ಆರ್. ಮೋಹನ್ (ಮಹಾರಾಜ ಸೋಶಿಯಲ್ ಎಫ್‌ಸಿ), ಎಸ್.ಶಿವ (ಅಂಬೇಡ್ಕರ್ ಎಫ್‌ಸಿ), ಕೆ.ಎಲ್. ಪ್ರಕಾಶ್ (ಬೆಂಗಳೂರು ಕಿಕ್ಕರ್ಸ್ ಎಫ್‌ಸಿ), ಜಿ. ಅಪ್ಪಾಜಿ (ಯುನಿವರ್ಸಲ್ ಎಫ್‌ಸಿ), ಸಗೈಬಕ್ಯಾನಾಥನ್ (ಓರಿಯಂಟಲ್ ಎಫ್‌ಸಿ), ಆರ್. ನಂದಕುಮಾರ್ (ಸರ್ಕಾರ ಎಫ್‌ಸಿ), ಸರಳಾ ಎನ್. ಸ್ವಾಮಿ (ವಿನಾಯಕ ಎಫ್‌ಸಿ), ಜಿ. ರಮೇಶ್ (ವೆಹಿಕಲ್ಸ್ ಎಫ್‌ಸಿ), ಎನ್. ರಮೇಶ್ ಕುಮಾರ್ (ಧರ್ಮರಾಜ ಯೂನಿಯನ್ ಎಫ್‌ಸಿ), ಎ. ಆರೋಕಿಯಾರಾಜ್ (ಬೆಂಗಳೂರು ಯಂಗ್‌ಸ್ಟರ್ಸ್ ಎಫ್‌ಸಿ), ಎಂ. ಮುಕುಂದನ್ ಬಾಲು (ಟೌನ್ ಎಸ್‌ಸಿ ಹೊಸಕೋಟೆ ಎಫ್‌ಸಿ), ಸತ್ಯರಾಜ್ (ರಿವೈವ್ ಎಫ್‌ಸಿ), ಪಿ. ರಾಜೇಂದ್ರ ಪ್ರಸಾದ್ (ನ್ಯೂ ಲಕ್ಕಿ ಸ್ಟಾರ್ ಎಫ್‌ಸಿ), ಪಿ.ಸಿ. ಸುಕಾನಂದ್ (ಬೆಂಗಳೂರು ಬ್ಲೂಸ್ ಎಫ್‌ಸಿ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.