ಫುಟ್‌ಬಾಲ್‌: ಇಂಡಿಪೆಂಡೆಂಟ್ಸ್‌ ತಂಡಕ್ಕೆ ಜಯ ಬೆಂಗಳೂರು: ಸರವಣಕುಮಾರ್ ಅವರ ಆಟದ ಬಲದಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–1ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಲಾಲ್ರೆಮ್ ರುವಾಟಾ ಅವರು 9ನೇ ನಿಮಿಷದಲ್ಲಿ ಗೋಲು ದಾಖಲಿಸಿ ಚಿಕ್ಕಮಗಳೂರು ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಇಂಡಿಪೆಂಡೆಂಟ್ಸ್‌ ತಂಡದ ಸತೀಶ್‌ಕುಮಾರ್‌ 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲ ತಂದಿತ್ತರು. ಸರವಣಕುಮಾರ್‌ (73 ಮತ್ತು 90+5ನೇ ನಿ) ಎರಡು ಗೋಲು ಗಳಿಸಿ ಇಂಡಿಪೆಂಡೆಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಮತ್ತೊಂದು ಪಂದ್ಯದಲ್ಲಿ ಎಎಸ್‌ಸಿ ಅಂಡ್ ಸೆಂಟರ್‌ ಎಫ್‌ಸಿ ತಂಡವು 2–1ರಿಂದ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವನ್ನು ಸೋಲಿಸಿತು. ಎಎಸ್‌ಸಿ ತಂಡದ ಶಂಶೀರ್ (59 ಮತ್ತು 71ನೇ) ಎರಡು ಗೋಲು ದಾಖಲಿಸಿ ಮಿಂಚಿದರು. ಸ್ಪೋರ್ಟಿಂಗ್‌ ಕ್ಲಬ್‌ ತಂಡದ ಗೋಲನ್ನು ಪಿ. ಅಪ್ಪು ಆರೋಗ್ಯಸ್ವಾಮಿ (15ನೇ) ತಂದಿತ್ತರು. ಇಂದಿನ ಪಂದ್ಯಗಳು ಎಚ್‌ಎಎಲ್‌ ಎಫ್‌ಸಿ– ಎಫ್‌ಸಿ ಡೆಕ್ಕನ್‌ (ಮಧ್ಯಾಹ್ನ 1.30) ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ– ಸೌತ್‌ ಯುನೈಟೆಡ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.