ಫುಟ್‌ಬಾಲ್‌: ಎಂಎಫ್‌ಎಆರ್‌ ತಂಡಕ್ಕೆ ಜಯ ಬೆಂಗಳೂರು: ಪ್ರತೀಕ್‌ ಸ್ವಾಮಿ ಅವರ ಅಮೋಘ ಆಟದ ನೆರವಿನಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 8–3ರಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು. ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 5 ಗೋಲುಗಳ ಅಂತರದಿಂದ ಎಂಎಫ್‌ಎಆರ್‌ ತಂಡ ಜಯ ಸಾಧಿಸಿತು. ಪ್ರತೀಕ್‌ ಸ್ವಾಮಿ (43, 44, 66, 67, 82ನೇ) ಐದು ಗೋಲು ದಾಖಲಿಸಿ ಮಿಂಚಿದರು. ಜಿ. ಉದಿತ್‌ (85, 88ನೇ) ಎರಡು, ಜೆನಿಶ್‌ಸಿಂಹ ರಾಣಾ (11ನೇ) ಒಂದು ಗೋಲು ಗಳಿಸಿದರು. ಚಾಲೆಂಜರ್ಸ್‌ ತಂಡದ ಪರವಾಗಿ ಇ. ದೇವರಾಜು (12ನೇ), ಲೆಟ್ಮಿನ್ ಲುನ್ ಸಿಂಗ್‌ಸನ್ (20ನೇ), ಸನ್ನಿ ಕುಮಾರ್ (34ನೇ) ತಲಾ ಒಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡವು 4–0ಯಿಂದ ಬಿಯುಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಸತೀಶ್‌ ಕುಮಾರ್‌ (17ನೇ), ಸರವಣಕುಮಾರ್ (47ನೇ), ರಾಜ ಗಣಪತಿ (75ನೇ), ಎಚ್‌. ಪ್ರಶಾಂತ್‌ (85ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಇಂದಿನ ಪಂದ್ಯಗಳು ಎಫ್‌ಸಿ ಬೆಂಗಳೂರು ಯುನೈಟೆಡ್‌– ರೂಟ್ಸ್‌ ಎಫ್‌ಸಿ (ಮಧ್ಯಾಹ್ನ 1.30) ರೆಬೆಲ್ಸ್‌ ಎಫ್‌ಸಿ– ಸ್ಪೋರ್ಟಿಂಗ್‌ ಕ್ಲಬ್ ಬೆಂಗಳೂರು (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.