ಫುಟ್‌ಬಾಲ್‌: ಯುನೈಟೆಡ್‌ ತಂಡಕ್ಕೆ ಜಯ ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 1–0 ಯಿಂದ ರೂಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಯುನೈಟೆಡ್‌ ತಂಡದ ಚೆಸ್ಟರ್ ಪೌಲ್ ಲಿಂಗ್ಡೊ 14ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಗೆಲುವಿನ ರೂವಾರಿಯಾದರು. ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು 4–1ರಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ಸ್ಪೋರ್ಟಿಂಗ್‌ ತಂಡದ ಪರ ಆರಿಫ್ ಶೇಖ್ (19 ಮತ್ತು 45+4ನೇ) ಎರಡು ಗೋಲು ಗಳಿಸಿ ಮಿಂಚಿದರು. ಅದೇ ತಂಡದ ಅಪ್ಪು ಆರೋಗ್ಯಸ್ವಾಮಿ (52ನೇ), ನಿರ್ಮಲ್‌ ಸಿಂಗ್‌ ಬಿಶ್ತ್ (87ನೇ) ತಲಾ ಒಂದು ಗೋಲು ದಾಖಲಿಸಿದರು. ಆರ್‌. ಪ್ರದೀಪ್‌ (4ನೇ) ರೆಬೆಲ್ಸ್‌ ಪರ ಏಕೈಕ ಗೋಲು ತಂದಿತ್ತರು. ಇಂದಿನ ಪಂದ್ಯಗಳು ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ– ರಿಯಲ್‌ ಚಿಕ್ಕಮಗಳೂರು ಎಫ್‌ಸಿ (ಮಧ್ಯಾಹ್ನ 1.30) ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ– ಬಿಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.