ಫುಟ್‌ಬಾಲ್‌: ಎಎಸ್‌ಸಿ ತಂಡಕ್ಕೆ ಜಯ ಬೆಂಗಳೂರು: ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–1 ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡದ ಟೋಂಗ್ಬ್ರಾಮ್ ಕೃಷ್ಣಕಾಂತ ಸಿಂಗ್ (27ನೇ), ಜಶಾನ್ ದೀಪ್ ಸಿಂಗ್ (42ನೇ), ಜಾಕೋಬ್ ವನ್ಲಾಲ್‌ಬೆಲಾ (52ನೇ), ಶಂಶೇರ್ ಸಿಂಗ್ (83ನೇ) ತಲಾ ಒಂದು ಗೋಲು ಗಳಿಸಿದರೆ, ಚಿಕ್ಕಮಗಳೂರು ತಂಡದ ಪರವಾಗಿ ಏಕೈಕ ಗೋಲನ್ನು ಇಲೆನ್ಸ್ ಶರ್ಮಾ (80ನೇ) ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 1–0 ಯಿಂದ ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಬಿಎಫ್‌ಸಿ ಪರವಾಗಿ ಗೆಲುವಿನ ಗೋಲನ್ನು ಲಾಲ್ಪೆಖ್ಲುವಾ (89) ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.