ಡುರಾಂಡ್‌ ಕಪ್‌ಗಾಗಿ ಈಸ್ಟ್‌ ಬೆಂಗಾಲ್‌– ಮೋಹನ್‌ ಬಾಗನ್‌ ಸೆಣಸು ಕೋಲ್ಕತ್ತ (ಪಿಟಿಐ): ಸಾಂಪ್ರದಾಯಿಕ ಎದುರಾಳಿಗಳಾದ ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್ ಮತ್ತು ಈಸ್ಟ್‌ ಬೆಂಗಾಲ್‌ ಎಫ್‌ಸಿ ತಂಡಗಳು 132ನೇ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿಗಾಗಿ ಭಾನುವಾರ ಸೆಣಸಾಡಲಿವೆ. ಡುರಾಂಡ್‌ ಕಪ್‌ ಪ್ರಶಸ್ತಿಯನ್ನು ತಲಾ 16 ಬಾರಿ ಗೆದ್ದಿರುವ ಪ್ರಬಲ ಎರಡು ತಂಡಗಳು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.‌ 2004ರ ಆವೃತ್ತಿಯಲ್ಲಿ ಇದೇ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, 2–1ರಿಂದ ಈಸ್ಟ್‌ ಬೆಂಗಾಲ್‌ ತಂಡ ಗೆದ್ದು, ಚಾಂಪಿಯನ್‌ ಆಗಿತ್ತು. ಈಸ್ಟ್‌ ಬೆಂಗಾಲ್‌ ತಂಡವು 2004ರ ಬಳಿಕ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಈ ಆವೃತ್ತಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿರುವ ಬೆಂಗಾಲ್‌ ತಂಡ ನಾಲ್ಕರಲ್ಲಿ ಗೆದ್ದರೆ, ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿ ಅಜೇಯವಾಗಿದೆ. ಮೋಹನ್‌ ಬಾಗನ್‌ ತಂಡವು 2000ರಲ್ಲಿ ಕೊನೆಯ ಬಾರಿ ಕಪ್‌ ಗೆದ್ದಿದೆ. ಇಂಡಿಯನ್ ಸೂಪರ್ ಲೀಗ್‌ನ ಹಾಲಿ ಚಾಂಪಿಯನ್ ಆಗಿರುವ ಬಾಗನ್‌ ತಂಡವು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. ಲೀಗ್‌ ಹಂತದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ 0–1ರಿಂದ ಸೋತಿದ್ದ ಬಾಗನ್‌ ತಂಡ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ. ಪಂದ್ಯ ಆರಂಭ: ಸಂಜೆ 4 ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್ 2, ಸೋನಿ ಎಲ್‌ಐವಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.