ಡುರಾಂಡ್‌ ಕಪ್‌: ಸೆಮಿಗೆ ಬಾಗನ್‌ ಕೋಲ್ಕತ್ತ (ಪಿಟಿಐ): ಅಮೋಘ ಆಟವಾಡಿದ ಐಎಸ್‌ಎಲ್‌ ಚಾಂಪಿಯನ್ ಮೋಹನ್ ಬಾಗನ್ ಸೂಪರ್‌ ಜೈಂಟ್ಸ್‌ ತಂಡ, ಭಾನುವಾರ ನಡೆದ ಡುರಾಂಡ್‌ ಕಪ್‌ ಫುಟ್‌ಬಾಲ್ ಟೂರ್ನಿಯ ಕೊನೆಯ ಕ್ವಾರ್ಟರ್‌ಫೈನಲ್‌ನಲ್ಲಿ 3–1 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸಿತು. ಬಾಗನ್ ತಂಡ ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಮೋಹನ್ ಬಾಗನ್ ತಂಡದ ಪರ ಜೇಸನ್‌ ಕುಮಿಂಗ್ಸ್‌, ಮನ್ವೀರ್‌ ಸಿಂಗ್‌ ಮತ್ತು ಅನ್ವರ್‌ ಅಲಿ ಗೋಲುಗಳನ್ನು ಗಳಿಸಿದರು. ಮುಂಬೈ ತಂಡದ ಏಕೈಕ ಗೋಲನ್ನು ಜಾರ್ಗೆ ಪಿರೇಯ್ರಾ ಡಯಾಝ್ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.