ಫುಟ್‌ಬಾಲ್‌: ಸೌತ್‌ ಯುನೈಟೆಡ್‌ಗೆ ಜಯ ಬೆಂಗಳೂರು: ಸೌತ್‌ ಯುನೈಟೆಡ್‌ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ರೆಬೆಲ್ಸ್‌ ಎಫ್‌.ಸಿ ತಂಡದವರನ್ನು ಮಣಿಸಿದರು. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬಿಬಿನ್‌ ಬಾಬು 6ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದು ರೆಬೆಲ್ಸ್ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಸೌತ್‌ ಯುನೈಟೆಡ್‌ನ ವಿ.ಎಸ್. ತೋಟ್ಕಧರ್ ಜಿಮಿಕ್ ಅವರು 13ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೋಲನ್ನು ಸಮಬಲ ಗೊಳಿಸಿದರು. 38ನೇ ನಿಮಿಷದಲ್ಲಿ ಎಂ.ಡಿ. ಅಲ್ತಾಬ್ ಹುಸೇನ್ ನಿರ್ಣಾಯಕ ಗೋಲು ತಂದಿತ್ತು, ಸೌತ್‌ ಯುನೈಟೆಡ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ಪಂದ್ಯದಲ್ಲಿ ಕಿಕ್‌ಸ್ಟಾರ್ಟ್ ಎಫ್‌.ಸಿ ತಂಡವು 4–0ಯಿಂದ ಅಗ್ನಿಪುತ್ರ ತಂಡವನ್ನು ಸೋಲಿಸಿತು. ಕಿಕ್‌ಸ್ಟಾರ್ಟ್ ತಂಡದ ಪರವಾಗಿ ಆರ್‌. ಸೊಲೈಮಲೈ (48 ಮತ್ತು 62ನೇ), ಬೆಂಜಮಿನ್ ಲುಫೆಂಗ್ (80ನೇ), ಅಭಿಷೇಕ್‌ ಪವರ್‌ (84ನೇ) ಗೋಲು ಗಳಿಸಿದರು. ಇಂದಿನ ಪಂದ್ಯಗಳು ರಿಯಲ್‌ ಚಿಕ್ಕಮಗಳೂರು ಎಫ್‌.ಸಿ– ಯಂಗ್‌ ಚಾಲೆಂಜರ್ಸ್‌ ಎಫ್‌.ಸಿ (ಮಧ್ಯಾಹ್ನ 1.30) ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌.ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌.ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.