ಐ ಲೀಗ್: ಬಿಎಫ್‌ಸಿಗೆ ಶಂಕರಲಾಲ್ ಮುಖ್ಯ ಕೋಚ್ ಬೆಂಗಳೂರು(ಪಿಟಿಐ): ಮಾಜಿ ಆಟಗಾರ ಶಂಕರಲಾಲ್ ಚಕ್ರವರ್ತಿ ಅವರನ್ನು ಐ ಲೀಗ್‌ನಲ್ಲಿ ಆಡುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಅವರು ಈ ಮೊದಲು ಐ ಲೀಗ್ ಕ್ಲಬ್‌ ಸುದೇವ ಡೆಲ್ಲಿ ಎಫ್‌ಸಿಗೆ ಕೋಚ್ ಆಗಿದ್ದರು. ಸದ್ಯ ಎರಡನೇ ಡಿವಿಷನ್‌ನಲ್ಲಿ ಆಡುತ್ತಿರುವ ಬಿಎಫ್‌ಸಿಗೆ ಅವರು ನೇಮಕವಾಗಿದ್ದಾರೆ. ‘ಐ ಲೀಗ್‌ನಲ್ಲಿ ಅಪಾರ ಅನುಭವ ಹೊಂದಿರುವ ಶಂಕರ್ ಲಾಲ್ ಚಕ್ರವರ್ತಿ ಅವರನ್ನು ತಂಡಕ್ಕೆ ನೇಮಕ ಮಾಡಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಮುಂಬರುವ ಟೂರ್ನಿಗಳಲ್ಲಿ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ‘ ಎಂದು ಕ್ಲಬ್‌ ಮಾಲೀಕರಾದ ಬೆಂಗಳೂರು ಯುನೈಟೆಡ್‌ನ ಗೌರವ್ ಮನಚಂದಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.