ಫುಟ್‌ಬಾಲ್‌: ರಿಯಲ್‌ ಚಿಕ್ಕಮಗಳೂರು ತಂಡಕ್ಕೆ ಜಯ ಬೆಂಗಳೂರು: ರಿಯಲ್‌ ಚಿಕ್ಕಮಗಳೂರು ಎಫ್.ಸಿ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 5–1ರಿಂದ ಯಂಗ್‌ ಚಾಲೆಂಜರ್ಸ್‌ ತಂಡದವರನ್ನು ಮಣಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ರಿಯಲ್‌ ತಂಡದ ಅಲೋಕ್ ಸಿಂಗ್ ಚೌಹಾಣ್ (45+2ನೇ ಹಾಗೂ 90ನೇ ನಿ.) ಎರಡು ಗೋಲು ಗಳಿಸಿ ಮಿಂಚಿದರು. ಟಿ.ವಿ. ಪ್ರಫುಲ್‌ ಕುಮಾರ್‌ (63ನೇ), ಹರಿದಯಾ ವಿನಯ್ ಜೈನ್ (67ನೇ), ಎಸ್‌. ಸಚ್ಚಿದಾನಂದ (84ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಯಂಗ್‌ ಚಾಲೆಂಜರ್ಸ್‌ ಪರ ಶರತ್‌ ಕುಮಾರ್‌ (45+3ನೇ) ಏಕೈಕ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌.ಸಿ ತಂಡವು 4–0ಯಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಪ್ರಸನ್ನ ಕುಮಾರ್‌ (41ನೇ), ಸರವಣಕುಮಾರ್ (60ನೇ), ವಿ.ಸುರೇಂದ್ರ ಪ್ರಸಾದ್‌ (63ನೇ) ಮತ್ತು ನಾಗೇಂದ್ರ ಪ್ರಸಾದ್‌ ವಿನ್ಸೆಂಟ್‌ (69ನೇ) ತಲಾ ಒಂದು ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.