ಫುಟ್‌ಬಾಲ್‌: ರೆಬೆಲ್ಸ್‌ ತಂಡ ಜಯಭೇರಿ ಬೆಂಗಳೂರು: ಸುರೇಜ್ ಗುರುಂಗ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ರೆಬೆಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–1ರಿಂದ ಯಂಗ್‌ ಚಾಲೆಂಜರ್ಸ್ ಎಫ್‌ಸಿ ವಿರುದ್ಧ ಸುಲಭ ಗೆಲುವು ಸಾಧಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ರೆಬೆಲ್ಸ್‌ ಪರ ಸುರೇಜ್‌ (43, 71, 74ನೇ ನಿ.), ಟಿ. ಅಮೋಸ್ (10, 68ನೇ), ಲಾಲ್ ಹೃಯತ್ಪುಯಾ ಖಿಯಾಂಗ್ಟೆ (85) ಕ್ರಮವಾಗಿ ಮೂರು, ಎರಡು ಮತ್ತು ಒಂದು ಗೋಲು ಗಳಿಸಿದರು. ನಿಖಿಲ್ ಬನಿಯಾ (83ನೇ) ಯಂಗ್‌ ಚಾಲೆಂಜರ್ಸ್‌ ಪರ ಏಕೈಕ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್ ಸೆಂಟರ್‌ ಎಫ್‌ಸಿ ತಂಡವು 1–1ರಿಂದ ಕೊಡಗು ಎಫ್‌ಸಿ ಜತೆ ಡ್ರಾ ಸಾಧಿಸಿತು. ಎಂಇಜಿ ತಂಡದ ಶೇಖ್‌ ಮುಜೀಬ್‌ (58ನೇ), ಕೊಡಗು ತಂಡದ ವಿಘ್ನೇಶ್‌ ಶ್ರೀನಿವಾಸ್‌ (80ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.