ಬಿಎಫ್‌ಸಿ ತಂಡಕ್ಕೆ ಗೆಲುವು ಬೆಂಗಳೂರು:ಬಿಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–0 ಯಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡದ ವಿರುದ್ಧ ಜಯ ಸಾಧಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ಪಿ. ಅಂಕಿತ್‌ (1ನೇ ನಿ.), ತೊಕ್ಚೊಂ ಮಲೆಮ್‌ಗಂಬ ಸಿಂಗ್ (30ನೇ), ಅಮಯ್ ಮೊರಾಜ್‌ಕರ್ (51ನೇ), ಸತೇಂದ್ರ ಸಿಂಗ್ ಯಾದವ್ (90+1ನೇ) ತಲಾ ಒಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ ತಂಡವು 2–1 ರಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು. ರೂಟ್ಸ್‌ ತಂಡದ ಯೊಹಾನ್ ವಿಕ್ಟರ್ (20ನೇ), ಗಾಡ್ವಿನ್ ಜಾನ್ಸನ್ (44ನೇ) ಗೋಲು ಗಳಿಸಿದರೆ, ಸೌತ್‌ ಯುನೈಟೆಡ್‌ ಪರ ಮಗೇಶ್ ಸೆಲ್ವ (35ನೇ) ಚೆಂಡನ್ನು ಗುರಿ ಸೇರಿಸಿದರು. ಇಂದಿನ ಪಂದ್ಯಗಳು ಎಚ್‌ಎಎಲ್‌ ಎಫ್‌ಸಿ– ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ (ಮಧ್ಯಾಹ್ನ 1.30) ಎಫ್‌ಸಿ ಡೆಕ್ಕನ್‌– ಬಿಯುಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.