ಫುಟ್‌ಬಾಲ್‌: ಎಚ್‌ಎಎಲ್‌ ತಂಡ ಜಯಭೇರಿ ಬೆಂಗಳೂರು: ಎಚ್‌ಎಎಲ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–1ರಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ವಿರುದ್ಧ ಜಯ ಸಾಧಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಸೊರೊಖೈಬಮ್ ಕಫೋಯ್ ಸಿಂಗ್ (10ನೇ ನಿ.), ಲಕ್ಪಾ ನಾರ್ಬು ಶೆರ್ಪಾ (13ನೇ), ಎಸ್. ಜಾನಿ ಕೋಮ್ (74ನೇ) ಎಚ್‌ಎಎಲ್‌ ಪರ ತಲಾ ಒಂದು ಗೋಲು ದಾಖಲಿಸಿದರು. ಆದಿತ್ಯ ಪ್ರತಾಪ್‌ ಸಿಂಗ್‌ (5ನೇ) ಸ್ಟೂಡೆಂಟ್ಸ್‌ನ ಪರ ಏಕೈಕ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಬಿಯುಎಫ್‌ಸಿ ತಂಡವು 2–0 ಯಿಂದ ಎಫ್‌ಸಿ ಡೆಕ್ಕನ್‌ ತಂಡವನ್ನು ಮಣಿಸಿತು. ಬಿಯುಎಫ್‌ಸಿ ತಂಡದ ಕೆ.ಎನ್‌. ಜೀವಿತ್‌ (45+2ನೇ), ಬೋನಿಸನ್ ನಾಂಗ್‌ಮೈಥೆಮ್ (48ನೇ) ತಲಾ ಒಂದು ಗೋಲು ಗಳಿಸಿದರು. ಇಂದಿನ ಪಂದ್ಯಗಳು ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ– ರೆಬೆಲ್ಸ್‌ ಎಫ್‌ಸಿ (ಮಧ್ಯಾಹ್ನ 1.30) ಎಫ್‌ಸಿ ಬೆಂಗಳೂರು ಯುನೈಟೆಡ್‌– ಎಫ್‌ಸಿ ಅಗ್ನಿಪುತ್ರ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.