ಯುನೈಟೆಡ್‌ ತಂಡ ಜಯಭೇರಿ ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–1ರಿಂದ ಎಫ್‌ಸಿ ಅಗ್ನಿಪುತ್ರ ವಿರುದ್ಧ ಜಯ ಗಳಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಯುನೈಟೆಡ್‌ ಪರ ಅಕ್ಷುನ್ನ ತ್ಯಾಗಿ (44, 60ನೇ ನಿ) ಎರಡು ಗೋಲು ಗಳಿಸಿದರೆ, ಜೈಸನ್ ಜೋರ್ಡಾನ್ ವಾಜ್‌ (21ನೇ), ಒಮೆಗಾ ವನ್‌ಲಾಲ್ (42ನೇ), ಜೆರ್ರಿ ಒನ್ ಸೆಮಾಸ್ (62ನೇ), ಉರಾಜ್ ಹಡ್ಕೊಂಕರ್ (87ನೇ) ತಲಾ ಒಂದೊಂದು ಗೋಲು ದಾಖಲಿಸಿದರು. ಲಾಲ್ನುಂಜಮಾ (75ನೇ) ಅಗ್ನಿಪುತ್ರ ಪರ ಏಕೈಕ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡವು 1–1ರಿಂದ ರೆಬಲ್ಸ್‌ ಎಫ್‌ಸಿ ಜತೆ ಡ್ರಾ ಸಾಧಿಸಿತು. ಇಂಡಿಪೆಂಡೆಂಟ್ಸ್‌ ಪರ ಎ.ಮೊಹಮ್ಮದ್ ಮೊಯಿನುದ್ದೀನ್ (3ನೇ), ರೆಬೆಲ್ಸ್‌ ಪರ ಬಿಬಿನ್‌ ಬಾಬು (41ನೇ) ಚೆಂಡನ್ನು ಗುರಿ ಸೇರಿಸಿದರು. ಇಂದಿನ ಪಂದ್ಯಗಳು ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ– ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು (ಮಧ್ಯಾಹ್ನ 1.30) ರಿಯಲ್ ಚಿಕ್ಕಮಗಳೂರು ಎಫ್‌ಸಿ– ಬಿಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.