ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌: ಎಂಇಜಿ ತಂಡ ಜಯಭೇರಿ ಬೆಂಗಳೂರು: ಎಂಇಜಿ ಅಂಡ್ ಸೆಂಟರ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 8–0 ಯಿಂದ ಯಂಗ್‌ ಚಾಲೆಂಜರ್ಸ್ ಎಫ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಎಂಇಜಿ ತಂಡದ ಶೇಖ್‌ ಮುಜೀಬ್ (42, 44, 73ನೇ ನಿ) ಹ್ಯಾಟ್ರಿಕ್‌ ಗೋಲು ಗಳಿಸಿದರೆ, ಶರತ್‌ ನಾರಾಯಣನ್‌ (47, 88ನೇ), ಇಮ್ನಾಕುಮ್ ತೆಮ್ಸು (59, 71ನೇ) ತಲಾ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು. ವಿ. ಪ್ರತಾಬ್‌ (77ನೇ) ಒಂದು ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು 1–0 ಯಿಂದ ರೂಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಏನಮ್ ಗ್ರಾಫೆನ್‌ಬರ್ಗ್ ಜುರ್ವಾ (52ನೇ) ಅವರು ಕಿಕ್‌ಸ್ಟಾರ್ಟ್‌ ತಂಡದ ಪರ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.