ಬೆಂಗಳೂರಿಗೂ ಸುಬ್ರತೊ ಕಪ್‌ ಟೂರ್ನಿ ಆತಿಥ್ಯ ನವದೆಹಲಿ: ಇದೇ ತಿಂಗಳ 19 ರಿಂದ ಅಕ್ಟೋಬರ್ 23ರವರೆಗೆ ನಡೆಯಲಿರುವ ಸುಬ್ರತೊ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ ಆತಿಥ್ಯಕ್ಕೆ ಬೆಂಗಳೂರನ್ನೂ ಸೇರ್ಪಡೆ ಮಾಡಲಾಗಿದೆ. ಸುಬ್ರತೊ ಕಪ್‌, ದೇಶದ ಅತಿ ಹಳೆಯ ರಾಷ್ಟ್ರೀಯ ಅಂತರ ಶಾಲಾ ಫುಟ್‌ಬಾಲ್ ಟೂರ್ನಿ ಆಗಿದೆ. 14 ವರ್ಷದೊಳಗಿನವರ ಸಬ್‌ ಜೂನಿಯರ್‌ ಬಾಲಕರ ವಿಭಾಗದ ಟೂರ್ನಿ ಬೆಂಗಳೂರಿನ ಎಎಸ್‌ಸಿ ಸೆಂಟರ್‌, ಜಾಲಹಳ್ಳಿಯ ಏರ್‌ಫೋರ್ಸ್‌ ಸ್ಕೂಲ್‌ ಮತ್ತು ಯಲಹಂಕದ ಏರ್‌ಫೋರ್ಸ್‌ ಸ್ಕೂಲ್‌ ಮೈದಾನದಲ್ಲಿ ನಡೆಯಲಿವೆ. ಟೂರ್ನಿಗೆ ಅಂತರರಾಷ್ಟ್ರೀಯ ಸ್ವರೂಪ ನೀಡಲು ಬಾಂಗ್ಲಾದೇಶ ಮತ್ತು ನೇಪಾಳದ ತಂಡಗಳನ್ನೂ ಆಹ್ವಾನಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.