ಡಿಎಚ್‌ ಕಪ್‌: ಬಾಷ್, ಅಡೋಬಿಗೆ ಗೆಲುವು ಬೆಂಗಳೂರು: ಬಾಷ್‌ ಮತ್ತು ಅಡೋಬಿ ತಂಡಗಳು ಇಲ್ಲಿ ಆರಂಭವಾದ ಟ್ರೂಆಲ್ಟ್‌ ಬಯೊಎನರ್ಜಿ ಡಿಎಚ್‌ ಕಪ್‌–2023 ‘ಫೈವ್‌ ಎ ಸೈಡ್‌’ ಕಾರ್ಪೊರೇಟ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದವು. ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಬಾಷ್‌ 4–2 ಗೋಲುಗಳಿಂದ ಎಂಯು ಸಿಗ್ಮಾ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 7–1 ರಿಂದ ಮಶ್ರೆಖ್ ವಿರುದ್ಧ ಗೆದ್ದಿತು. ಅಡೋಬಿ 7–2 ರಿಂದ ಮಾಯಾ ಎಸ್ಟೇಟ್ಸ್ ತಂಡವನ್ನು ಸೋಲಿಸಿತು. ದಿ ಟಿಮ್‌ಕೆನ್‌ ಕಂಪನಿ ತಂಡವು ಬಿಗ್‌ ಬ್ರೂಸ್ಕಿ ಮತ್ತು ಟ್ರೂಆಲ್ಟ್‌ ತಂಡಗಳ ವಿರುದ್ಧ ಕ್ರಮವಾಗಿ 5–0 ಹಾಗೂ 12–0 ಯಿಂದ ಗೆದ್ದಿತು. ಇತರ ಪಂದ್ಯಗಳಲ್ಲಿ ಬ್ರಿಗೇಡ್‌ ಗ್ರೂಪ್ 7–0 ಯಿಂದ ಟ್ರೂಆಲ್ಟ್ ಬಯೊಎನರ್ಜಿ ವಿರುದ್ದ; ಜಾನ್‌ ಡಿಸ್ಟಿಲರೀಸ್ 8–1 ರಿಂದ ಜೆನೆಕ್ಸ್‌ ವಿರುದ್ಧ; ಎಂಯು ಸಿಗ್ಮಾ 2–0 ರಿಂದ ಕಾರ್ಲೆ ಇನ್ಫೋಟೆಕ್‌ ವಿರುದ್ಧ; ಟಿವಿಎಸ್‌ ಮೋಟರ್‌ ಕಂ. 2–1 ರಿಂದ ಕಾರ್ಲೆ ಇನ್‌ಫ್ರಾ ವಿರುದ್ದ; ಸ್ವಿಸ್‌ ರೇ 7–0 ಯಿಂದ ಮಶ್ರೆಖ್ ವಿರುದ್ದ ಜಯ ಸಾಧಿಸಿದವು. ಐಕ್ವಿಯಾ– ವಿಸೆನ್‌ ಇನ್ಫೋಟೆಕ್‌ ನಡುವಣ ಪಂದ್ಯ 2–2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.