ಡಿಎಚ್‌ ಕಪ್‌: ಐಕ್ವಿಯಾ, ಸ್ವಿಸ್‌ ರೇ ತಂಡಗಳಿಗೆ ಜಯ ಬೆಂಗಳೂರು: ಐಕ್ವಿಯಾ, ಸ್ವಿಸ್‌ ರೇ ತಂಡಗಳು ಇಲ್ಲಿ ನಡೆಯುತ್ತಿರುವ ಟ್ರೂಆಲ್ಟ್‌ ಬಯೊಎನರ್ಜಿ ಡಿಎಚ್‌ ಕಪ್‌–2023 ‘ಫೈವ್‌ ಎ ಸೈಡ್‌’ ಕಾರ್ಪೊರೇಟ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದವು. ಟೂರ್ನಿಯ ಎರಡನೇ ದಿನವಾದ ಭಾನುವಾರ ನಡೆದ ಪಂದ್ಯದಲ್ಲಿ ಐಕ್ವಿಯಾ ತಂಡವು 3–1 ಗೋಲುಗಳಿಂದ ಬಿಗ್‌ ಬ್ರೂಸ್ಕಿ ತಂಡವನ್ನು ಮಣಿಸಿದರೆ, ಸ್ವಿಸ್‌ ರೇ ತಂಡವು 9–0ಯಿಂದ ಜೆನೆಕ್ಸ್‌ ತಂಡದ ವಿರುದ್ಧ ಸುಲಭ ಜಯ ದಾಖಲಿಸಿತು. ವಿಸೆನ್‌ ಇನ್ಫೋಟೆಕ್‌ ತಂಡವು ಅಡೋಬಿ ತಂಡ ಮತ್ತು ಬಿಗ್‌ ಬ್ರೂಸ್ಕಿ ತಂಡಗಳ ವಿರುದ್ಧ ಕ್ರಮವಾಗಿ 8–1ರಿಂದ ಮತ್ತು 14–5ರಿಂದ ಜಯ ಗಳಿಸಿತು. ಜಾನ್‌ ಡಿಸ್ಟಿಲರೀಸ್ ತಂಡವು 2–0ರಿಂದ ಟಿವಿಎಸ್‌ ಮೋಟರ್‌ ತಂಡದ ವಿರುದ್ಧ ಗೆಲುವು ಸಾಧಿಸಿದರೆ, ಸ್ವಿಸ್‌ ರೇ ತಂಡದ ವಿರುದ್ಧ 2–2ರಿಂದ ಡ್ರಾ ಸಾಧಿಸಿತು. ಇತರ ಪಂದ್ಯಗಳಲ್ಲಿ ದಿ ಟಿಮ್‌ಕೆನ್‌ ಕಂಪನಿ 7–1ರಿಂದ ಮಾಯಾ ಎಸ್ಟೇಟ್ಸ್ ವಿರುದ್ಧ; ಬಾಷ್‌ 11–1ರಿಂದ ಜೆನೆಕ್ಸ್‌ ವಿರುದ್ಧ; ದಿ ಟಿಮ್‌ಕೆನ್‌ ಕಂಪನಿ 7–0ಯಿಂದ ಮಾಯಾ ಎಸ್ಟೇಟ್ಸ್ ವಿರುದ್ಧ; ಅಡೋಬಿ 7–0ಯಿಂದ ಬ್ರಿಗೇಡ್‌ ಗ್ರೂಪ್ ವಿರುದ್ಧ; ಎಂಯು ಸಿಗ್ಮಾ ತಂಡ 4–1ರಿಂದ ಟಿವಿಎಸ್‌ ಮೋಟರ್‌ ಕಂ. ವಿರುದ್ಧ ಗೆಲುವು ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.