ಫುಟ್‌ಬಾಲ್‌: ಅಗ್ನಿಪುತ್ರ ತಂಡಕ್ಕೆ ಜಯ ಬೆಂಗಳೂರು: ‌‌ನಿಖಿಲ್‌ರಾಜ್ ಮುರುಗೇಶ್ ಕುಮಾರ್ ಅವರ ಆಟದ ನೆರವಿನಿಂದ ಎಫ್‌ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ರೂಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ನಿಖಿಲ್‌ರಾಜ್ (15, 28ನೇ) ಎರಡು ಗೋಲು ಗಳಿಸಿ ಮಿಂಚಿದರು. ರೂಟ್ಸ್‌ ಪರ ಅನಿರುದ್ಧ್ ಮುಕುಂದನ್ (88ನೇ) ಏಕೈಕ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದೊಂದಿಗೆ ಗೋಲಿಲ್ಲದೇ ಡ್ರಾ ಸಾಧಿಸಿತು. ನಾಳಿನ ಪಂದ್ಯಗಳು ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ– ಬಿಯುಎಫ್‌ಸಿ (ಮಧ್ಯಾಹ್ನ 1.30) ಎಫ್‌ಸಿ ಬೆಂಗಳೂರು ಯುನೈಟೆಡ್‌– ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.