ಸ್ಯಾಫ್‌ ಟೂರ್ನಿ: ಭಾರತಕ್ಕೆ ಪ್ರಶಸ್ತಿ ತಿಂಫು, ಭೂತಾನ್: ಬಾಂಗ್ಲಾದೇಶ ತಂಡವನ್ನು 2–0 ಗೋಲುಗಳಿಂದ ಮಣಿಸಿದ ಭಾರತ, ಸ್ಯಾಫ್‌ 16 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಚಾಂಗ್ಲಿಮಿತಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭರತ್ ಲಾಯ್‌ರೆಂಜಮ್ (8ನೇ ನಿ.) ಮತ್ತು ಲೆವಿಸ್ ಝಾಂಗ್‌ಮಿನ್ಲುನ್ (74ನೇ ನಿ.) ಅವರು ಭಾರತ ತಂಡದ ಪರ ಗೋಲು ಗಳಿಸಿದರು. ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಆಟವಾಡಿದ್ದ ಭಾರತ ತಂಡದವರು ಸೆಮಿಫೈನಲ್‌ನಲ್ಲಿ 8–0 ಗೋಲುಗಳಿಂದ ಮಾಲ್ಡೀವ್ಸ್‌ ತಂಡವನ್ನು ಸೋಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.