: ಕಲಬುರಗಿಯಲ್ಲಿ ಫಿಫಾ ಮಾದರಿ ಫುಟ್‌ಬಾಲ್‌ ಅಂಗಣದ ಆಕರ್ಷಣೆ ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್‌ ಮಾತ್ರ ಎನ್ನುವಂತಾಗಿರುವ ಈ ಸಂದರ್ಭದಲ್ಲಿ ತೊಗರಿ ಕಣಜ ಕಲಬುರಗಿಯಲ್ಲಿ ಫಿಫಾ ಮಾದರಿ ಫುಟ್‌ಬಾಲ್‌ ಅಂಗಣ ಸಿದ್ಧಗೊಳ್ಳುತ್ತಿದೆ. ಐಪಿಎಸ್‌ ಅಧಿಕಾರಿ ಯಡಾ ಮಾರ್ಟಿನ್‌ ಅವರ ಪರಿಶ್ರಮದ ಪರಿಣಾಮ ವಿಶ್ವದರ್ಜೆಯ ಅಂಗಣ ಸಿದ್ಧವಾಗುತ್ತಿದೆ. ಮಣ್ಣಿನ ಅಂಗಳದಲ್ಲಿ ಅಭ್ಯಾಸ ನಡೆಸಿಯೇ ರಾಷ್ಟ್ರಮಟ್ಟದ ಫುಟ್‌ಬಾಲ್‌ ಕ್ರೀಡಾಕೂಟಗಳಲ್ಲಿ ಮಿಂಚಿದ ಪ್ರತಿಭಾನ್ವಿತ ಆಟಗಾರರು ಕಲಬುರಗಿಯಲ್ಲಿದ್ದಾರೆ. ಈಗ ನಿರ್ಮಾಣವಾಗುತ್ತಿರುವ ಹೊಸ ಅಂಗಣ ಫುಟ್‌ಬಾಲ್‌ ಆಟಗಾರರಿಗೆ ದೊಡ್ಡ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.