ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌: ಎಚ್‌ಎಎಲ್‌ ತಂಡ ಜಯಭೇರಿ ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಎಚ್‌ಎಎಲ್‌ ತಂಡದ ಆಟಗಾರರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–0ಯಿಂದ ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ವರೀಸ್ ಅಹಮ್ಮದ್ ಭಟ್ (16ನೇ ನಿ), ಲಕ್ಪಾ ನಾರ್ಬು ಶೆರ್ಪಾ (50ನೇ), ಎ. ದಿವಾಕರ್‌ (67, 87ನೇ) ಅವರು ಎಚ್‌ಎಎಲ್‌ ಪರ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು 1–0ಯಿಂದ ಎಫ್‌ಸಿ ಡೆಕ್ಕನ್‌ ತಂಡದ ವಿರುದ್ಧ ಗೆಲುವು ಸಾಧಿಸಿತು. ಚೆಸ್ಟರ್ ಪೌಲ್ ಲಿಂಗ್ಡೋ (76ನೇ) ಯುನೈಟೆಡ್‌ ಪರ ಗೆಲುವಿನ ಗೋಲು ಗಳಿಸಿದರು. ಇಂದಿನ ಪಂದ್ಯಗಳು ಬೆಂಗಳೂರು ಇಂಡಿಪೆಂಡೆ‌ಂಟ್ಸ್‌ ಎಫ್‌ಸಿ– ಎಎಸ್‌ಸಿ ಅಂಡ್ ಸೆಂಟರ್‌ ಎಫ್‌ಸಿ (ಬೆಳಿಗ್ಗೆ 11.30) ರೂಟ್ಸ್‌ ಎಫ್‌ಸಿ– ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ (ಮಧ್ಯಾಹ್ನ 1.30) ಬಿಎಫ್‌ಸಿ– ರೆಬೆಲ್ಸ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.