ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌: ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಜಯ ಬೆಂಗಳೂರು: ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದವರು ಬಿಡಿಎಫ್ಎ ಆಶ್ರಯದ ರಾಜ್ಯ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 5–2 ಗೋಲುಗಳಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಮಣಿಸಿದರು. ಸೋಮವಾರ ನಡೆದ ಪಂದ್ಯದಲ್ಲಿ ತಲಾ ಎರಡು ಗೋಲುಗಳನ್ನು ಗಳಿಸಿದ ಅಲಿಸ್ಟರ್‌ ಆಂಥೋಣಿ (42 ಮತ್ತು 72ನೇ ನಿ.) ಹಾಗೂ ಅಭಿಷೇಕ್‌ ಶಂಕರ್ (45+1 ಮತ್ತು 55) ಅವರು ಕಿಕ್‌ಸ್ಟಾರ್ಟ್‌ ಗೆಲುವಿನಲ್ಲಿ ಗಮನ ಸೆಳೆದರು. ಇನ್ನೊಂದು ಗೋಲನ್ನು ರಾಜೇಂದ್ರ ಸಿಂಗ್‌ (59) ತಂದಿತ್ತರು. ಯಂಗ್‌ ಚಾಲೆಂಜರ್ಸ್‌ ಪರ ದೇವರಾಜ್ (10) ಹಾಗೂ ಝಬೀತ್ ಡೌಸೆಲ್ (20) ಅವರು ಗೋಲು ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಎಂಇಜಿ ಮತ್ತು ಸೆಂಟರ್‌ ಎಫ್‌ಸಿ 2–1 ಗೋಲುಗಳಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಕೆ.ನವೀನ್ (19) ಮತ್ತು ಅಹಮದ್‌ ಅಸ್ರಾರುಲ್ (46) ಅವರು ಗೋಲು ಗಳಿಸಿ ಎಂಇಜಿ ಗೆಲುವಿಗೆ ಕಾರಣರಾದರು. ರೆಬೆಬ್ಸ್‌ ತಂಡದ ಗೋಲನ್ನು ತಿಲಕ್‌ ದೇವದತ್ತ ಅವರು 51ನೇ ನಿಮಿಷದಲ್ಲಿ ತಂದಿತ್ತರು. ಇಂದಿನ ಪಂದ್ಯಗಳು ರಿಯಲ್‌ ಚಿಕ್ಕಮಗಳೂರು ಎಫ್‌ಸಿ– ಬಿಯುಎಫ್‌ಸಿ (ಮಧ್ಯಾಹ್ನ 1.30) ಎಚ್‌ಎಎಲ್‌ ಎಫ್‌ಸಿ– ಎಫ್‌ಸಿಎ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.