ಅಕ್ಟೋಬರ್‌ನಲ್ಲಿ ಕೋಲ್ಕತ್ತಕ್ಕೆ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಭೇಟಿ ಕೋಲ್ಕತ್ತ: ಬ್ರೆಜಿಲ್ ದೇಶದ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಅವರು ಮುಂದಿನ ತಿಂಗಳೂ ದುರ್ಗಾಪೂಜೆ ನಡೆಯುವ ಸಂದರ್ಭದಲ್ಲಿ ಕೋಲ್ಕತ್ತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 15 ರಿಂದ 19ರವರೆಗೆ ಅವರು ಕೋಲ್ಕತ್ತಕ್ಕೆ ಪ್ರಯಾಣಿಸಲಿದ್ದಾರೆ. ರೊನಾಲ್ಡಿನೊ ಅವರು ಇದೇ ಮೊದಲ ಬಾರಿಗೆ ಕೋಲ್ಕತ್ತಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಇಲ್ಲ ಆಯೋಜಿಸಲಾಗುತ್ತಿರುವ ಸಹಾಯಾರ್ಥ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ದುರ್ಗಾಪೂಜೆ ಪೆಂಡಾಲ್‌ಗೂ ಭೇಟಿ ನೀಡಲಿದ್ದು, ಫುಟ್‌ಬಾಲ್ ಕ್ಲಿನಿಕ್‌ನಲ್ಲಿಯೂ ಭಾಗವಹಿಸುವರು. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಆರ್ಜೆಂಟೀನಾ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಪುತ್ಥಳಿಯನ್ನೂ ರೊನಾಲ್ಡಿನೊ ಅನಾವರಣಗೊಳಿಸುವರ ಎಂದು ಮೂಲಗಳು ತಿಳಿಸಿವೆ. ರೊನಾಲ್ಡಿನೊ ಅವರ ಆರ್‌10 ಫುಟ್‌ಬಾಲ್ ಅಕಾಡೆಮಿಯೂ ಕೋಲ್ಕತ್ತದ ರಾಜೃರಥ್‌ನಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.