ಫುಟ್‌ಬಾಲ್‌: ರೆಬೆಲ್ಸ್‌ ತಂಡಕ್ಕೆ ಜಯ ಬೆಂಗಳೂರು: ರೆಬೆಲ್ಸ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಪುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ಬಿಯುಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಬುಧವಾರ ನಡೆದ ಪಂದ್ಯದಲ್ಲಿ ರೆಬೆಲ್ಸ್‌ನ ರೋಡಿನ್‌ಪುಯಾ (66ನೇ), ರಿಷಭ್‌ (90+3ನೇ) ತಲಾ ಒಂದು ಗೋಲು ಗಳಿಸಿದರೆ, ಆರ್‌.ಪ್ರದೀಪ್‌ (29ನೇ) ಬಿಯುಎಫ್‌ಸಿ ಪರ ಏಕೈಕ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು 2–0 ಯಿಂದ ಸೌತ್‌ ಯುನೈಟೆಡ್‌ ತಂಡವನ್ನು ಮಣಿಸಿತು. ಸ್ಪೋರ್ಟಿಂಗ್‌ ತಂಡದ ಆಸಿಫ್ (15ನೇ), ಸೌವಿಕ್ ದಾಸ್ (36ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಪಂದ್ಯಗಳು ಎಫ್‌ಸಿ ಡೆಕ್ಕನ್‌– ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ (ಮಧ್ಯಾಹ್ನ 1.30) ಎಫ್‌ಸಿ ಅಗ್ನಿಪುತ್ರ– ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.