ಫುಟ್‌ಬಾಲ್‌: ಬಿಎಫ್‌ಸಿಗೆ ಗೆಲುವು ಬೆಂಗಳೂರು: ಬಿಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–0ಯಿಂದ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡವನ್ನು ಮಣಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ಚಿಂಗಂಬ್‌ಗಮ್ ಶಿವಾಲ್ಡೋ ಸಿಂಗ್ (53ನೇ) ಮತ್ತು ಸತ್ಯೇಂದ್ರ ಸಿಂಗ್‌ ಯಾದವ್‌ (83ನೇ) ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವು 2–2ರಿಂದ ರೂಟ್ಸ್‌ ಎಫ್‌ಸಿ ಜತೆ ಡ್ರಾ ಸಾಧಿಸಿತು. ಎಂಇಜಿ ತಂಡದ ಶರತ್ ನಾರಾಯಣ (5ನೇ), ಶೇಖ್‌ ಮುಜೀಬ್‌ (56ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಗೌತಮ್‌ ರಾಜೇಶ್‌ (25ನೇ), ಆರ್‌. ಧನುಷ್‌ (69ನೇ) ರೂಟ್ಸ್‌ ಪರ ಗೋಲು ತಂದಿತ್ತರು. ಇಂದಿನ ಪಂದ್ಯಗಳು ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ– ಬೆಂಗಳೂರು ಯುನೈಟೆಡ್‌ ಎಫ್‌ಸಿ (ಮಧ್ಯಾಹ್ನ 1.30) ಯಂಗ್‌ ಚಾಲೆಂಜರ್ಸ್‌ ಎಫ್‌ಸಿ– ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ (ಮಧ್ಯಾಹ್ನ 3.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.