ಫುಟ್‌ಬಾಲ್‌: ಎಚ್‌ಎಎಲ್‌ ತಂಡಕ್ಕೆ ಜಯ ಬೆಂಗಳೂರು: ವಿ. ಶ್ರೇಯಸ್ ಅವರ ಆಟದ ಬಲದಿಂದ ಎಚ್‌ಎಎಲ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 2–1ರಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೇಯಸ್‌ (20, 22ನೇ) ಎರಡು ಗೋಲು ಗಳಿಸಿದರೆ, ಚಿಕ್ಕಮಗಳೂರು ತಂಡದ ಪರ ಪ್ರಫುಲ್‌ ಕುಮಾರ್‌ (86ನೇ) ಒಂದು ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಕೊಡಗು ಎಫ್‌ಸಿ ತಂಡವು 4–1ರಿಂದ ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ವಿರುದ್ಧ ಜಯ ಸಾಧಿಸಿತು. ಕೊಡಗು ತಂಡದ ಶ್ಲೋಕ್‌ ತಿವಾರಿ (36, 90+4ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರೆ, ರೊಮಾರಿಯೊ ನಜರೆತ್ (48ನೇ), ಅಲೆಕ್ಸ್ ಕೊಂತೌಜಮ್ (68ನೇ‌) ತಲಾ ಒಂದು ಗೋಲು ಗಳಿಸಿದರು. ಎಎಸ್‌ಸಿ ಪರ ಏಕೈಕ ಗೋಲನ್ನು ದಿಲೋನ್ ಖಾರ್ಕಾ (60ನೇ) ತಂದಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.