ಫುಟ್‌ಬಾಲ್‌: ಕರ್ನಾಟಕಕ್ಕೆ ಮಣಿದ ತ್ರಿಪುರ ಬೆಂಗಳೂರು: ಕವಿಯಾ ಪಕ್ಕಿರಿಸ್ವಾಮಿ ಅವರ ಅದ್ಭುತ ಆಟದ ನೆರವಿನಿಂದ ಕರ್ನಾಟಕ ತಂಡದವರು ಮಹಿಳೆಯರ 28ನೇ ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿನ್‌ನ ಪಂದ್ಯದಲ್ಲಿ 8–0ಯಿಂದ ತ್ರಿಪುರ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡದ ಕವಿಯಾ (36, 71, 75, 76ಬೇ ನಿ.) ನಾಲ್ಕು ಗೋಲು ಗಳಿಸಿದರೆ, ಮೊನಾಲಿಶ್ ಮರಾಂಡಿ (15, 78ನೇ) ಎರಡು ಗೋಲು ತಂದಿತ್ತರು. ರೋಸಿ ತಂಗಾ (43ನೇ), ಎಂ. ಐಶ್ವರ್ಯಾ (45+2ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಪಂದ್ಯದಲ್ಲಿ ಪಿ. ಮಾಳವಿಕಾ ಅವರ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಕೇರಳ ತಂಡವು 7–2ರಿಂದ ಅಸ್ಸಾಂ ವಿರುದ್ಧ ಗೆಲುವು ದಾಖಲಿಸಿತು. ಇನ್ನೊಂದು ಪಂದ್ಯದಲ್ಲಿ ಸಿಕ್ಕಿಂ ತಂಡವು ಚಂಡೀಗಢ ತಂಡದೊಂದಿಗೆ ಗೋಲುರಹಿತ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.