ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ ತಂಡಕ್ಕೆ ಜಯ ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–1ರಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಯುನೈಟೆಡ್‌ ತಂಡದ ಪರವಾಗಿ ಜೈಸನ್‌ ಜೋರ್ಡಾನ್‌ ವಾಜ್‌, ಅಕ್ಷುನ್ನ ತ್ಯಾಗಿ, ರಾಯನ್ ವಿಲ್ಫ್ರೆಡ್, ಆಶ್ರಯ ಭಾರದ್ವಾಜ್ ತಲಾ ಒಂದು ಗೋಲು ಗಳಿಸಿದರು. ರೆಬೆಲ್ಸ್‌ ಪರ ಏಕೈಕ ಗೋಲನ್ನು ಸೂರಜ್ ಗುರುಂಗ್ ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ತಂಡವು 7–2 ರಿಂದ ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು. ಅಗ್ನಿಪುತ್ರ ತಂಡದ ಪರ ನಿಖಿಲ್ ರಾಜ್ ಮುರುಗೇಶಕುಮಾರ್ ಹ್ಯಾಟ್ರಿಕ್‌ ಗೋಲು ಗಳಿಸಿದರು. ಸುಕ್‌ರಾಜ್ ಸುಬ್ಬ, ಯಾದವ್ ರಾಹುಲ್, ಪ್ರಶಾತ್ ಚೆಟ್ರಿ, ಲಾಲ್ನುಂಜಮಾ ತಲಾ ಒಂದು ಗೋಲು ಗಳಿಸಿದರು. ಎಎಸ್‌ಸಿ ತಂಡದ ಪರ ವಹೆಂಗಬಾಮ್ ನೀರಜ್ ಕುಮಾರ್ ಮತ್ತು ಸುರೇಶ್ ಸಿಂಗ್ ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಇಂದಿನ ಪಂದ್ಯಗಳು ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ– ಸೌತ್‌ ಯುನೈಟೆಡ್‌ ಎಫ್‌ಸಿ (ಮಧ್ಯಾಹ್ನ 12) ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು– ರಿಯಲ್ ಚಿಕ್ಕಮಗಳೂರು ಎಫ್‌ಸಿ (ಮಧ್ಯಾಹ್ನ 1.30) ಬಿಎಫ್‌ಸಿ– ರೂಟ್ಸ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.