ಫುಟ್‌ಬಾಲ್‌: ಇಶಾನ್‌ ಹ್ಯಾಟ್ರಿಕ್‌- ಸೌತ್ ತಂಡಕ್ಕೆ ಜಯ ಬೆಂಗಳೂರು: ಇಶಾನ್‌ ಸಾಹಿ ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಸೌತ್ ಯುನೈಟೆಡ್ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 5–0 ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್‌ ಎಫ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಇಶಾನ್ (10, 19, 29ನೇ ನಿ) ಮೂರು ಗೋಲು ಗಳಿಸಿದರೆ, ನಿಖಿಲ್‌ ಮಾಲಿ (30ನೇ), ಎಡ್ವಿನ್‌ ರೊಜಾರಿಯೊ (39ನೇ) ತಲಾ ಒಂದು ಗೋಲು ತಂದಿತ್ತರು. ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ತಂಡವು 2–0 ಯಿಂದ ರಿಯಲ್ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ಚಿಕ್ಕಮಗಳೂರು ತಂಡದ ಇಶಾನ್ ರಘುನಂದ (15ನೇ), ಆರೀಫ್‌ ಶೇಖ್‌ (64ನೇ) ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 2–0 ಯಿಂದ ರೂಟ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ಬಿಎಫ್‌ಸಿ ತಂಡದ ತಾಕ್‌ಚೊಮ್‌ ಮಲೆಂಗಾಂಬ (3ನೇ), ಅಮಯ್ ಮೊರಾಜಕರ್ (28ನೇ) ತಲಾ ಒಂದು ಗೋಲು ಗಳಿಸಿದರು. ಇಂದಿನ ಪಂದ್ಯಗಳು ಎಚ್‌ಎಎಲ್‌ ಎಫ್‌ಸಿ– ಯಂಗ್ ಚಾಲೆಂಜರ್ಸ್‌ ಎಫ್‌ಸಿ (ಮಧ್ಯಾಹ್ನ 1.30) ಕಿಕ್‌ಸ್ಟಾರ್ಟ್‌ ಎಫ್‌ಸಿ– ಬಿಯುಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.