ಇಂಗ್ಲೆಂಡ್‌ನ ದಿಗ್ಗಜ ಫುಟ್‌ಬಾಲ್‌ ಆಟಗಾರ ಬಾಬಿ ಚಾರ್ಲ್‌ಟನ್‌ ನಿಧನ ಮ್ಯಾಂಚೆಸ್ಟರ್: ಇಂಗ್ಲೆಂಡ್‌ನ ದಿಗ್ಗಜ ಫುಟ್‌ಬಾಲ್‌ ಆಟಗಾರ ಬಾಬಿ ಚಾರ್ಲ್‌ಟನ್‌ (86) ಅವರು ಶನಿವಾರ ನಿಧನರಾದರು. ಇಂಗ್ಲೆಂಡ್‌ ರಾಷ್ಟ್ರೀಯ ತಂಡ (49 ಗೋಲುಗಳು) ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ (249) ಪರ ಅತಿಹೆಚ್ಚು ಗೋಲು ಗಳಿಸಿದ್ದ ದಾಖಲೆ 40 ವರ್ಷಗಳ ಕಾಲ ಅವರ ಹೆಸರಿನಲ್ಲಿತ್ತು. ವೇಯ್ನ್‌ ರೂನಿ ಈ ದಾಖಲೆ ಮುರಿದಿದ್ದರು. ಶಿಸ್ತಿನ ಆಟಕ್ಕೆ ಹೆಸರುವಾಸಿಯಾಗಿದ್ದ ಬಾಬಿ, ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡಿದ್ದ 758 ಪಂದ್ಯಗಳು (1956–73ರ ಅವಧಿ) ಮತ್ತು ಇಂಗ್ಲೆಂಡ್‌ ಪರ ಆಡಿದ್ದ 106 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ (1958–70) ಒಮ್ಮೆಯೂ ಕೆಂಪು ಕಾರ್ಡ್‌ ಪಡೆದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.