ಎಚ್‌ಎಎಲ್‌ ತಂಡಕ್ಕೆ ಜಯ ಬೆಂಗಳೂರು: ಎಚ್‌ಎಎಲ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–0ಯಿಂದ ಬೆಂಗಳೂರು ಇಂಡಿಂಪೆಂಡೆಂಟ್ಸ್‌ ಎಫ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಶ್ರೇಯಸ್‌ ವಾಟೇಕರ್‌ (3ನೇ ನಿ) ಮತ್ತು ಎಸ್‌. ಜಾನಿ ಕೋಮ್‌ (41ನೇ) ಅವರು ಎಚ್‌ಎಎಲ್‌ ‍‍ಪರ ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬಿಎಫ್‌ಸಿ ತಂಡವು 2–1ರಿಂದ ಬಿಯುಎಫ್‌ಸಿ ತಂಡವನ್ನು ಮಣಿಸಿತು. ಬಿಎಫ್‌ಸಿಯ ಸತ್ಯೇಂದ್ರ ಸಿಂಗ್ ಯಾದವ್ (10ನೇ), ತೊಕ್ಚೊಂ ಮಲೆಂಗೆಂಬಾ ಸಿಂಗ್ (14ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಬಿಯುಎಫ್‌ಸಿಯ ಕೊಂತೌಜಮ್ ದನೆಲ್ ಸಿಂಗ್ (90+3ನೇ) ಒಂದು ಗೋಲು ತಂದಿತ್ತರು. ಇಂದಿನ ಪಂದ್ಯಗಳು ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ– ಕಿಕ್‌ಸ್ಟಾರ್ಟ್ ಎಫ್‌ಸಿ (ಮಧ್ಯಾಹ್ನ 1.30) ಯಂಗ್ ಚಾಲೆಂಜರ್ಸ್‌ ಎಫ್‌ಸಿ– ಎಫ್‌ಸಿ ಡೆಕ್ಕನ್‌ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.