ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಯುನೈಟೆಡ್‌ ಎಫ್‌ಸಿ ತಂಡಕ್ಕೆ ಗೆಲುವು ಬೆಂಗಳೂರು: ಇಶಾನ್‌ ಶಾಹಿ ಅವರ ಆಟದ ಬಲದಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 3–2ರಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಇಶಾನ್‌ (60, 90+2ನೇ) ಎರಡು ಗೋಲು ಗಳಿಸಿ ಮಿಂಚಿದರು. ಯು.ಕೆ. ಸೂರ್ಯ (70ನೇ) ಯುನೈಟೆಡ್‌ ಪರ ಒಂದು ಗೋಲು ಗಳಿಸಿದರು. ಚಾಲೆಂಜರ್ಸ್‌ನ ಸೂರಜ್ (20ನೇ), ಲೆಟ್ಮಿನ್ಲುನ್ ಸಿಂಗ್ಸನ್ (53) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಪಂದ್ಯದಲ್ಲಿ ಕೊಡಗು ಎಫ್‌ಸಿ ತಂಡವು 2–0ಯಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಬಿಕ್ರಮ್ ಸರ್ಕಾರ್ (60ನೇ), ಅಲೆಕ್ಸ್ ಕೊಂತೌಜಮ್ (73ನೇ) ತಲಾ ಒಂದು ಗೋಲು ತಂದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.