ಜೀವಿತ್‌ ಹ್ಯಾಟ್ರಿಕ್‌: ಬಿಯುಎಫ್‌ಸಿಗೆ ಜಯ ಬೆಂಗಳೂರು: ಕೆ.ಎನ್‌. ಜೀವಿತ್‌ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬಿಯುಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–0 ಯಿಂದ ಬಿಡಿಯುಎಫ್‌ಸಿ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಜೀವಿತ್‌ (63, 80, 86ನೇ) ಹ್ಯಾಟ್ರಿಕ್‌ ಗೋಲು ದಾಖಲಿಸಿ ಮಿಂಚಿದರು. ಬೋನಿಸನ್ ನಾಂಗ್‌ಮೈಥೆಮ್ (61ನೇ) ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ ತಂಡವು 2–1ರಿಂದ ರಿಯಲ್‌ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ರೂಟ್ಸ್‌ ತಂಡದ ಗಾಡ್ವಿನ್ ಜಾನ್ಸನ್ (44ನೇ), ಕೆ.ಪಿ.ಮೊಹಮ್ಮದ್ ಮಿಕ್ದಾದ್ (68ನೇ) ತಲಾ ಒಂದು ಗೋಲು ಗಳಿಸಿದರು. ಹಿಮಾಂಶು ಥಾಪಾ (30ನೇ) ರಿಯಲ್ ತಂಡದ ಪರ ಏಕೈಕ ಗೋಲು ತಂದಿತ್ತರು. ಇಂದಿನ ಪಂದ್ಯಗಳು ಕೊಡಗು ಎಫ್‌ಸಿ– ಬಿಎಫ್‌ಸಿ (ಮಧ್ಯಾಹ್ನ 1.30) ಎಫ್‌ಸಿ ಬೆಂಗಳೂರು ಯುನೈಟೆಡ್‌– ಕಿಕ್‌ಸ್ಟಾರ್ಟ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.