ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ಮತ್ತೆ ಸೋಲು ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಮುಂಬೈ ಸಿಟಿ ತಂಡದವರು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ 4–0 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಸುಲಭವಾಗಿ ಮಣಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಮುಗ್ಗರಿಸಿತು. ‌ಅಬ್ಡೆನಾಸೆರ್ ಎಲ್ ಖಯಾತಿ (11ನೇ ನಿ), ಆಕಾಶ್‌ ಮಿಶ್ರಾ (30ನೇ), ಜಾರ್ಜ್ ಪೆರೇರಾ ಡಯಾಸ್‌ (57ನೇ), ಲಾಲಿಯನ್ಜುವಾಲಾ ಛಾಂಗ್ಟೆ (61) ಅವರು ಮುಂಬೈ ತಂಡದ ಪರ ಗೋಲು ಗಳಿಸಿದರು. ಈ ಟೂರ್ನಿಯಲ್ಲಿ ಬಿಎಫ್‌ಸಿ ತಂಡವು ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ನಾಲ್ಕು ಡ್ರಾ ಆಗಿದ್ದು, ಉಳಿದ ನಾಲ್ಕರಲ್ಲಿ ಸೋತಿದೆ. ಏಳು ಅಂಕಗಳೊಂದಿಗೆ ಬೆಂಗಳೂರು ತಂಡ 9ನೇ ಸ್ಥಾನದಲ್ಲಿದ್ದರೆ, 14 ಅಂಕಗಳೊಂದಿಗೆ ಮುಂಬೈ ಸಿಟಿ ತಂಡ ನಾಲ್ಕನೇ ಸ್ಥಾನಕ್ಕೆ ಏರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.