ಐಡಬ್ಲ್ಯುಎಲ್ | ತವರಿನಲ್ಲಿ ಗೆದ್ದ ಕಿಕ್‌ಸ್ಟಾರ್ಟ್ ಬೆಂಗಳೂರು: ಕಿಕ್‌ಸ್ಟಾರ್ಟ್‌ ಫುಟ್‌ಬಾಲ್ ಕ್ಲಬ್ ತಂಡವು ಶನಿವಾರ ನಡೆದ ಇಂಡಿಯನ್ ವುಮೆನ್ಸ್ ಲೀಗ್ (ಐಡಬ್ಲ್ಯುಎಲ್) ಟೂರ್ನಿಯ ಪಂದ್ಯದಲ್ಲಿ ಜಯಿಸಿತು. ಅಶೋಕನಗರದ ಕರ್ನಾಟಕ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್ ತಂಡವು 3–1ರಿಂದ ಈಸ್ಟ್‌ ಬೆಂಗಾಲ್ ವಿರುದ್ಧ ಜಯಿಸಿದರು. ಕಿಕ್ ಸ್ಟಾರ್ಟ್‌ ತಂಡದ ಪುರುಷೋತ್ತಮ ಶಿರ್ವೊಳ್ಕರ್ (41ನೆ ನಿ, 69ನಿ, 90ನಿ) ಹ್ಯಾಟ್ರಿಕ್ ಸಾಧಿಸಿದರು. ಈಸ್ಟ್ ಬೆಂಗಾಲ್ ತಂಡದ ಸುಲಂಜನಾ ರೌಲ್ (86ನಿ) ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.