ಫುಟ್‌ಬಾಲ್‌ ದಿಗ್ಗಜ ಫ್ರಾಂಜ್ ಬೆಕೆನ್‌ಬಾರ್ ಇನ್ನಿಲ್ಲ ಬರ್ಲಿನ್‌: ಜರ್ಮನಿಯ ಫುಟ್‌ಬಾಲ್‌ ದಿಗ್ಗಜ ಫ್ರಾಂಜ್ ಬೆಕೆನ್‌ಬಾರ್ (78) ಅನಾರೋಗ್ಯದಿಂದ ಭಾನುವಾರ ನಿಧನರಾದರು ಎಂದು ಜರ್ಮನ್ ಫುಟ್‌ಬಾಲ್ ಸಂಸ್ಥೆ ಸೋಮವಾರ ತಿಳಿಸಿದೆ. 1974ರ ಫುಟ್‌ಬಾಲ್‌ ವಿಶ್ವಕಪ್‌ ಗೆದ್ದ ಪಶ್ಚಿಮ ಜರ್ಮನಿ ತಂಡದ ನಾಯಕರಾಗಿದ್ದ ಬೆಕೆನ್‌ಬಾರ್, 1990ರ ವಿಶ್ವಕಪ್‌‌ ವಿಜೇತ ಜರ್ಮನಿ ತಂಡದ ತರಬೇತುದಾರನಾಗಿಯೂ ಕಾರ್ಯ ನಿರ್ವಹಿಸಿದ್ದರು. ಸೊಗಸಾದ ಆಟದ ಶೈಲಿ ಮತ್ತು ನಾಯಕತ್ವ ಗುಣಗಳಿಂದಾಗಿ ಅವರನ್ನು ‘ಕೈಸರ್’ (ಸಾಮ್ರಾಟ) ಎಂದು ಕರೆಯಲಾಗುತ್ತಿತ್ತು. ಆಟಗಾರನಾಗಿ ಮತ್ತು ತರಬೇತುದಾರನಾಗಿ ವಿಶ್ವಕಪ್ ಗೆದ್ದ ವಿಶ್ವದ ಕೇವಲ ಮೂರನೇ ಆಟಗಾರ ಬೆಕೆನ್‌ಬಾರ್. (ಉಳಿದ ಇಬ್ಬರು– ಫ್ರಾನ್ಸ್‌ನ ಡಿಡಿಯರ್ ದೆಶ್ಚಾಂಪ್ಸ್‌ ಮತ್ತು ಈಚೆಗೆ ನಿಧನರಾದ ಬ್ರೆಜಿಲ್‌ನ ಮಾರಿಯೊ ಝಗಾಲೊ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.