ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಮ್ಯಾನೇಜರ್ ಗೊರಾನ್ ಎರಿಕ್‌ಸನ್‌ಗೆ ಕ್ಯಾನ್ಸರ್ ಸ್ಟಾಕ್‌ಹೋಮ್: ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ಮ್ಯಾನೇಜರ್ ಸ್ವೇನ್ ಗೊರಾನ್ ಎರಿಕ್‌ಸನ್ ಅವರಿಗೆ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಅವರು ಇನ್ನು ‘ಒಂದು ವರ್ಷ‘ ಮಾತ್ರ ಬದುಕಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಎರಿಕ್‌ಸನ್ ಅವರಿಗೆ 75 ವರ್ಷವಾಗಿದೆ. ಅವರು ಪ್ರತಿಷ್ಠಿತ ತಂಡಗಳಿಗೆ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2002 ಮತ್ತು 2006ರಲ್ಲಿ ಇಂಗ್ಲೆಂಡ್ ತಂಡವು ಫಿಫಾ ವಿಶ್ವಕಪ್ ಕ್ವಾರ್ಟರ್‌ಫೈನಲ್ ತಲುಪಿದ್ದ ಇಂಗ್ಲೆಂಡ್ ತಂಡಕ್ಕೆ ಅವರು ಮ್ಯಾನೇಜರ್ ಆಗಿದ್ದರು. ‘ವೈದ್ಯರು ಹೇಳಿರುವ ಪ್ರಕಾರ ಅತಿ ಹೆಚ್ಚು ಎಂದರೆ ಒಂದು ವರ್ಷ ಬದುಕಬಹುದು. ಅದಕ್ಕಿಂತಲೂ ಕಡಿಮೆಯೂ ಆಗಬಹುದು. ಆದರೆ ನಾನು ಹೋರಾಡ ಮಾಡುತ್ತೇನೆ’ ಎಂದು ಪಬ್ಲಿಕ್ ಬ್ರಾಡ್‌ಕಾಸ್ಟರ್ ಎಸ್‌ವೆರಿಗೆಸ್ ರೇಡಿಯೋ ಸಂದರ್ಶನದಲ್ಲಿ ಎರಿಕ್‌ಸನ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.