ಫುಟ್‌ಬಾಲ್‌ ಕ್ರೀಡೆಗೆ ಉತ್ತೇಜನ ‌ಅಗತ್ಯ: ಬೈಚುಂಗ್‌ ಭುಟಿಯಾ ಬೆಂಗಳೂರು: ‘ಹಾಕಿ ಕ್ರೀಡೆಯನ್ನು ಒಡಿಶಾ ಸರ್ಕಾರವು ಪ್ರೋತ್ಸಾಹಿಸುವಂತೆ ಫುಟ್‌ಬಾಲ್‌ ಕ್ರೀಡೆಯನ್ನು ಉತ್ತೇಜಿಸಲು ಇತರ ರಾಜ್ಯಗಳ ಸರ್ಕಾರಗಳು ಮುಂದಾಗಬೇಕು’ ಎಂದು ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಒತ್ತಾಯಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಪ್ರಿಯ ಕ್ರೀಡೆಯಾಗಿರುವ ಫುಟ್‌ಬಾಲ್‌, ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ನಮ್ಮ ದೇಶದಲ್ಲೂ ಅದ್ಭುತ ಪ್ರತಿಭೆಗಳಿದ್ದು, ಅವುಗಳನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು. ‘ಒಬ್ಬ ಫುಟ್‌ಬಾಲ್ ಆಟಗಾರನಾಗಿ ಮೈದಾನದಲ್ಲಿ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ನನ್ನ ನಿಜವಾದ ಗೆಲುವು. ನಾನು ಮಾಸ್ಟರ್‌ಕ್ಲಾಸ್ ನಡೆಸಲು ಮತ್ತು ಫುಟ್‌ಬಾಲ್‌ನಲ್ಲಿ ನನ್ನ ಕೌಶಲಗಳನ್ನು ಭವಿಷ್ಯದ ಆಟಗಾರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದರು. ಪಾಲುದಾರಿಕೆ ಬೈಚುಂಗ್ ಭುಟಿಯಾ ಅವರ 'ಬೈಚುಂಗ್ ಭುಟಿಯಾ ಫುಟ್‌ಬಾಲ್‌ ಅಕಾಡೆಮಿ’ಯೊಂದಿಗೆ ಬೆಂಗಳೂರಿನ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಪಾಲುದಾರಿಕೆಯನ್ನು ಘೋಷಿಸಿದೆ. ‘ಪವರ್ ಅಪ್ ವಿತ್ ಲೆಜೆಂಡ್ಸ್’ ಸರಣಿಯ ಭಾಗವಾಗಿ ಆರ್ಕಿಡ್‌ನ ಹರಳೂರು ಮತ್ತು ಕಾಡುಗೋಡಿ ಕ್ಯಾಂಪಸ್‌ಗಳಲ್ಲಿ ಗುರುವಾರದಿಂದ ಫುಟ್‌ಬಾಲ್ ತರಬೇತಿ ಶಿಬಿರ ನಡೆಯುತ್ತಿದೆ. ಶನಿವಾರ ಬೈಚುಂಗ್‌ ಅವರು ‌‘ಮಾಸ್ಟರ್‌ ಕ್ಲಾಸ್‌’ ನಡೆಸಿಕೊಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.