ರಾಜ್ಯ ಫುಟ್‌ಬಾಲ್ ಮಹಿಳಾ ತಂಡದ ಮಾಜಿ ಕೋಚ್‌ ಸೋಮು ಸುಂದರ್ ನಿಧನ ಬೆಂಗಳೂರು: ಸರ್ಕಾರಿ ಮುದ್ರಣಾಲಯ ತಂಡದ ಮಾಜಿ ಆಟಗಾರ, ರಾಜ್ಯ ಫುಟ್‌ಬಾಲ್ ಮಹಿಳಾ ತಂಡದ ಮಾಜಿ ಕೋಚ್‌ ಸೋಮು ಸುಂದರ್ (78) ಅವರು ಗುರುವಾರ ಹೊಸಕೋಟೆಯಲ್ಲಿ ನಿಧನರಾದರು. ಅವರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ. 1979ರಲ್ಲಿ ಅವರು ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಕೋಚ್ ಆಗಿದ್ದರು. ಬೆಂಗಳೂರಿನ ಎನ್‌ಐಎಸ್‌ ಸರ್ಟಿಫಿಕೆಷನ್ ಕೋರ್ಸ್ ಮಾಡಿದ್ದರು. ಕರ್ನಾಟಕದ ತಂಡಗಳಿಗೆ ಕೋಚ್ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.