ಫೆ.21ರಿಂದ ಸಂತೋಷ್ ಟ್ರೋಫಿ ನವದೆಹಲಿ: ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತು ಫೆಬ್ರವರಿ 21ರಂದು ಇಟಾನಗರದಲ್ಲಿ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಗೋಲ್ಡನ್ ಜುಬಿಲಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಎಐಎಫ್ಎಫ್ ಭಾನುವಾರ ಪ್ರಕಟಿಸಿದೆ. ಮಾರ್ಚ್ 9 ರಿಂದ ನಡೆಯಲಿರುವ 12 ತಂಡಗಳ ಟೂರ್ನಿಯಲ್ಲಿ ಆತಿಥೇಯ ಅರುಣಾಚಲ ಪ್ರದೇಶ ಹಾಗೂ ಕರ್ನಾಟಕ, ಮೇಘಾಲಯ ತಂಡಗಳು ನೇರ ಪ್ರವೇಶ ಪಡೆದಿವೆ. ಗೋವಾ, ದೆಹಲಿ, ಮಣಿಪುರ, ಅಸ್ಸಾಂ, ಸರ್ವಿಸಸ್, ಮಹಾರಾಷ್ಟ್ರ, ಕೇರಳ, ಮಿಜೋರಾಂ ಮತ್ತು ರೈಲ್ವೆ ತಂಡಗಳು ಕಣದಲ್ಲಿರುವ ಇತರ ತಂಡಗಳಾಗಿವೆ. ಅರುಣಾಚಲ ಪ್ರದೇಶ, ಮೇಘಾಲಯ, ಗೋವಾ, ಅಸ್ಸಾಂ, ಸರ್ವಿಸಸ್ ಮತ್ತು ಕೇರಳ ತಂಡಗಳು 'ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ. 'ಬಿ' ಗುಂಪಿನಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಮಣಿಪುರ, ಮಿಜೋರಾಂ ಮತ್ತು ರೈಲ್ವೇಸ್ ತಂಡಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.