ಫುಟ್‌ಬಾಲ್‌ ಟೂರ್ನಿ: ಭಾರತಕ್ಕೆ ನಾಳೆ ಉಜ್ಬೇಕ್ ಸವಾಲು ಅಲ್ ರಯಾನ್: ಆಸ್ಟ್ರೇಲಿಯಾಕ್ಕೆ ಮೊದಲ ಪಂದ್ಯದಲ್ಲಿ ಮಣಿಯುವ ಮುನ್ನ ಕೆಚ್ಚೆದೆಯ ಪ್ರದರ್ಶನ ನೀಡಿದ್ದ ಭಾರತ ತಂಡ, ಏಷ್ಯನ್ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತನ್ನ ಎರಡನೇ ಲೀಗ್‌ ಪಂದ್ಯದಲ್ಲಿ ಉಜ್ಬೇಕಿಸ್ತಾನ ತಂಡವನ್ನು ಗುರುವಾರ ಎದುರಿಸಲಿದೆ. ಪ್ರಶಸ್ತಿಗೆ ನೆಚ್ಚಿನ ತಂಡವಾದ ಆಸ್ಟ್ರೇಲಿಯಾಕ್ಕೆ ಜನವರಿ 13ರಂದು ನಡೆದ ಪಂದ್ಯದ ಮೊದಲ ‍50 ನಿಮಿಷ ಭಾರತ ಗೋಲು ನಿರಾಕರಿಸಿತ್ತು. ಆದರೆ ನಂತರ 0–2ರಿಂದ ಸೋತಿತ್ತು. ಉಜ್ಬೇಕಿಸ್ತಾನ ಮೊದಲ ಪಂದ್ಯದಲ್ಲಿ ಸಿರಿಯಾ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡಿತ್ತು. ಉಜ್ಬೇಕ್ ತಂಡ ವಿಶ್ವ ಕ್ರಮಾಂಕದಲ್ಲಿ 68ನೇ ಸ್ಥಾನದಲ್ಲಿದೆ. ಭಾರತ 102ನೇ ಸ್ಥಾನದಲ್ಲಿದೆ. ಚೀನಾ ಇನ್ನೊಂದು ಪಂದ್ಯದಲ್ಲಿ ಲೆಬನಾನ್ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡು ಅಪಾಯಕ್ಕೆ ಸಿಲುಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.