‘ಬಿವಿಎಸ್‌ ಅಮೃತ ಮಹೋತ್ಸವ ಟ್ರೋಫಿ’ ಫುಟ್‌ಬಾಲ್‌: ಮರ್ಚಂಟ್‌ ಎಫ್‌ಸಿಗೆ ಪ್ರಶಸ್ತಿ ಮಂಗಳೂರು: ಡ್ಯಾನಿಯಲ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ನಗರದ ಮರ್ಚಂಟ್‌ ಎಫ್‌ಸಿ ತಂಡ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮಾರಕ ಆಹ್ವಾನಿತ ಫುಟ್‌ಬಾಲ್ ಟೂರ್ನಿ ‘ಬಿವಿಎಸ್‌ ಅಮೃತ ಮಹೋತ್ಸವ ಟ್ರೋಫಿ’ಯ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮರ್ಚಂಟ್‌ ಎಫ್‌ಸಿ 2–0ಯಿಂದ ತಮಿಳುನಾಡಿನ ರತ್ನಂ ಎಫ್‌ಸಿಯನ್ನು ಭಾನುವಾರ ಮಣಿಸಿತು. 70 ನಿಮಿಷಗಳ ಪಂದ್ಯದ 34ನೇ ನಿಮಿಷ ಮತ್ತು 67ನೇ ನಿಮಿಷಗಳಲ್ಲಿ ಡ್ಯಾನಿಯಲ್ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.