ಪಂಜಾಬ್‌ಗೆ ಮಣಿದ ಬೆಂಗಳೂರು ಎಫ್‌ಸಿ ನವದೆಹಲಿ (ಪಿಟಿಐ): ಪಂಜಾಬ್‌ ಎಫ್‌ಸಿ ತಂಡ, ಶನಿವಾರ ನಡೆದ ಇಂಡಿಯನ್ ಸೂಪರ್‌ ಲೀಗ್ 13ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 3–1 ಗೋಲುಗಳಿಂದ ಸೊಲಿಸಿತು. ವಿಲ್ಮರ್ ಜೋರ್ಡಾನ್ ಗಿಲ್‌ (23ನೇ ನಿಮಿಷ), ಲ್ಯುಕಾ ಮೆಯ್ಸೆನ್ (71ನೇ) ಮತ್ತು ಮದೀಹ್ ತಲಾಲ್ (77ನೇ) ಅವರು ಆತಿಥೇಯ ತಂಡದ ಪರ ಗೋಲುಗಳನ್ನು ಗಳಿಸಿದರು. ನಾಯಕ ಸುನೀಲ್ ಚೆಟ್ರಿ (15ನೇ ನಿಮಿಷ) ಬೆಂಗಳೂರು ತಂಡದ ಏಕೈಕ ಗೋಲನ್ನು ಗಳಿಸಿದರು. ವಿರಾಮದ ವೇಳೆಗೆ ಸ್ಕೋರ್‌ 1–1 ರಲ್ಲಿ ಸಮನಾಗಿತ್ತು. ಈ ಹಿನ್ನಡೆಯಿಂದ ಬೆಂಗಳೂರು ಎಫ್‌ಸಿ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿಯಿತು. ಇನ್ನೊದೆಡೆ, ಗೆಲುವಿನೊಡನೆ ಪಂಜಾಬ್ ತಂಡ (11 ಪಂದ್ಯಗಳಿಂದ 13 ಪಾಯಿಂಟ್ಸ್‌) 11ನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿತು. ಬೆಂಗಳೂರು ತಂಡ 11 ಪಾಯಿಂಟ್ಸ್ ಹೊಂದಿದೆ. ಪಂಜಾಬ್ ಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ಫೆ. 12ರಂದು ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಆಡಲಿದೆ. ಬೆಂಗಳೂರು ಎಫ್‌ಸಿ ಫೆ. 7ರಂದು ತವರಿನಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.