2023: ಸಿರಿಯಾ ವಿರುದ್ಧವೂ ಮುಗ್ಗರಿಸಿದ ಭಾರತ, ಅಭಿಯಾನ ಅಂತ್ಯ ಕತಾರ್: ಎಎಫ್‌ಸಿ ಏಷ್ಯಾ ಕಪ್ 2023 ಫುಟ್ಬಾಲ್ ಟೂರ್ನಿಯಲ್ಲಿ ಸಿರಿಯಾ ವಿರುದ್ಧ ಇಂದು ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲೂ ಭಾರತ 0-1 ಗೋಲಿನ ಅಂತರದ ಸೋಲಿಗೆ ಶರಣಾಗಿದೆ. ಇದರೊಂದಿಗೆ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಭಾರತದ ಅಭಿಯಾನ ಕೊನೆಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಅನುಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ಉಜ್ಬೇಕಿಸ್ತಾನ ವಿರುದ್ಧ ಭಾರತ ಪರಾಭವಗೊಂಡಿತ್ತು. ನಾಕ್‌ಔಟ್ ಪ್ರವೇಶಕ್ಕೆ ಇರುವ ಕ್ಷೀಣ ಅವಕಾಶವನ್ನು ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಫಿಫಾ ವಿಶ್ವ ಕ್ರಮಾಂಕದಲ್ಲಿ ತನಗಿಂತಲೂ ಉತ್ತಮ ಸ್ಥಾನ ಹೊಂದಿರುವ ಸಿರಿಯಾ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನೀಡಿದರೂ, 76ನೇ ನಿಮಿಷದಲ್ಲಿ ಗೋಲು ಬಿಟ್ಟು ಕೊಡುವ ಮೂಲಕ ಭಾರತದ ಗೆಲುವಿನ ಆಸೆ ಕಮರಿತು. #AsianCup2023 .# ⚔️ # 🐯 # ⚽ ../UBuX0Ty74h ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.