ಯುರೋ ಕಪ್ ಫುಟ್‌ಬಾಲ್ ಇಂದಿನಿಂದ: ಆತಿಥೇಯ ಜರ್ಮನಿಗೆ ಸ್ಕಾಟ್ಲೆಂಡ್ ಸವಾಲು ಮ್ಯೂನಿಚ್: ಯುರೋಪ್ ಖಂಡದ ದಿಗ್ಗಜರು ಮತ್ತು ಉದಯೋನ್ಮುಖ ಫುಟ್‌ಬಾಲ್ ಆಟಗಾರರ ಕಾಲ್ಚಳಕದ ಹಬ್ಬ ಯುರೋ ಕಪ್ –2024 ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತೀಯ ಕಾಲಮಾನದ ಪ್ರಕಾರ; ಶುಕ್ರವಾರ ತಡರಾತ್ರಿ ನಡೆಯಲಿರುವ ಟೂರ್ನಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಜರ್ಮನಿ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗಲಿವೆ. 2014ರ ವಿಶ್ವಕಪ್ ಜಯಿಸಿದ್ದ ಜರ್ಮನಿ ತಂಡಕ್ಕೆ ನಾಯಕರಾಗಿದ್ದ ಫಿಲಿಪ್ ಲಾಮ್ ಈಗ ಯುರೋ 2024 ಟೂರ್ನಿಯ ನಿರ್ದೇಶಕರಾಗಿದ್ದಾರೆ. ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹಂಗರಿ ಹಾಗೂ ಸ್ವಿಟ್ಜರ್‌ಲೆಂಡ್ ಹಣಾಹಣಿ ನಡೆಸಲಿವೆ. ಇದೇ ದಿನ ನಡೆಯುವ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಮತ್ತು ಕ್ರೊವೇಷ್ಯಾ ಮುಖಾಮುಖಿಯಾಗಲಿವೆ. ಐದು ಗುಂಪುಗಳು: ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪೈಪೋಟಿ ನಡೆಸಲಿವೆ. ಐದು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೀಲಿಯನ್ ಎಂಬಾಪೆ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಪಂದ್ಯ ಆರಂಭ: ರಾತ್ರಿ 12.30 ನೇರಪ್ರಸಾರ : ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.