| ಉರುಗ್ವೆ ನಿರ್ಗಮನ; ಅರ್ಜೆಂಟೀನಾ ಕೊಲಂಬಿಯಾ ಫೈನಲ್ ನಾರ್ತ್ ಕರೋಲಿನಾ: ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ತಂಡವನ್ನು 1-0 ಗೋಲುಗಳಿಂದ ಮಣಿಸಿರುವ ಕೊಲಂಬಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. 39ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜೆಫರ್ಸನ್ ಲೆರ್ಮಾ, ಗೆಲುವಿನ ರೂವಾರಿ ಎನಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕೊಲಂಬಿಯಾ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾದ ಸವಾಲನ್ನು ಎದುರಿಸಲಿದೆ. ಮತ್ತೊಂದೆಡೆ ಕೆನಡಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದೆ. 2001ರಲ್ಲಿ ಚಾಂಪಿಯನ್ ಆಗಿದ್ದ ಕೊಲಂಬಿಯಾ... ಕೊಪಾ ಅಮೆರಿಕ ಟೂರ್ನಿಯಲ್ಲಿ ಒಂದು ಸಲ ಮಾತ್ರ ಕೊಲಂಬಿಯಾ ಟ್ರೋಫಿ ಗೆದ್ದಿದೆ. 2001ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿದ್ದ ಕೊಲಂಬಿಯಾ ಪ್ರಶಸ್ತಿ ಗೆದ್ದಿತ್ತು. ಈಗ 23 ವರ್ಷಗಳ ಬಳಿಕ ಮತ್ತೆ ಫೈನಲ್‌ಗೆ ಪ್ರವೇಶಿಸಿರುವ ಕೊಲಂಬಿಯಾ ಮತ್ತೆ ಕಿರೀಟದ ಮೇಲೆ ಕಣ್ಣಾಯಿಸಿದೆ. CRÉELO, 🥹 ../N1MimuJb3l ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.