ಬೆಂಗಳೂರು: ಪಾಸ್‌, ಮಿಸಾಕಾ ಯುನೈಟೆಟ್‌ ಎಫ್‌ಸಿಗೆ ಗೆಲುವು ಬೆಂಗಳೂರು: ರಜಿಯಾ ಖಾನ್‌ ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಪಾಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು ಯುನೈಟೆಡ್‌ ಎಫ್‌ಸಿ ಕೊಡಗು ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು. ರಾಜ್ಯ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ವುಮೆನ್ಸ್‌ ಲೀಗ್‌ನ ಪಂದ್ಯದಲ್ಲಿ ಪಾಸ್‌ ಎಫ್‌ಸಿಯು 5–0 ಅಂತರದಲ್ಲಿ ಜಯ ದಾಖಲಿಸಿತು. ಪಾಸ್‌ ಎಫ್‌ಸಿ ಪರ ರುಕ್ಸಾನಾ ಬಾನು (9ನೇ ನಿ) ಮತ್ತು ರುಚಿ (82ನೇ ನಿ) ತಲಾ ಒಂದು ಗೋಲು ಗಳಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಮಿಸಾಕಾ ಯುನೈಟೆಡ್‌ ಎಫ್‌ಸಿ ತಂಡವು 5–1ರಿಂದ ಪಿಂಕ್‌ ಪ್ಯಾಂಥರ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ಮಿಸಾಕಾ ಎಫ್‌ಸಿ ಪರ ಸಿಬಾನಿ (32ನೇ ನಿ ಮತ್ತು 49ನೇ ನಿಮಿಷ) ಮತ್ತು ಸುಜಾತಾ ರೈ (64ನೇ ಮತ್ತು 77ನೇ ನಿ) ಎರಡು, ಕವಿಯಾ ಎಸ್‌.(52ನೇ ನಿ) ಒಂದು ಗೋಲು ದಾಖಲಿಸಿದರು. ರಫಿಯಾ ಫಾತಿಮಾ (91ನೇ ನಿ) ಅವರು ಪಿಂಕ್‌ ಪ್ಯಾಂಥರ್ಸ್‌ ಪರ ಏಕೈಕ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.