ಫುಟ್‌ಬಾಲ್: ಭಾರತದ ಎದುರು ಸಿರಿಯಾಗೆ ಜಯ ಹೈದರಾಬಾದ್ : ಭಾರತ ತಂಡವು ಸೋಮವಾರ ನಡೆದ ಇಂಟರ್‌ ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸಿರಿಯಾ ಎದುರು 3–0ಯಿಂದ ಪರಾಭವಗೊಂಡಿತು. ಸಿರಿಯಾ ತಂಡದ ಮೆಹಮೂದ್ ಅಲ್ ಅಸ್ವದ್ (7ನೇ ನಿ), ಡಲೆಹೊ ಇರಾನಡಸ್ಟ್ (76ನಿ) ಮತ್ತು ಪಾಬ್ಲೊ ಸಬಾಗ್ (90+6) ಗೋಲು ಗಳಿಸಿದರು. ಇದಕ್ಕಿಂತ ಮುನ್ನ ನಡೆದ ಭಾರತ ಮತ್ತು ಮಾರಿಷಸ್ ನಡುವಣ ಪಂದ್ಯವು ಗೋಲಿಲ್ಲದ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.