2023 : ಆಸೀಸ್ ವಿರುದ್ಧ ಟಾಸ್ ಗೆದ್ದ ಲಂಕಾ, ಬ್ಯಾಟಿಂಗ್ ಆಯ್ಕೆ ಲಖನೌ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಇಂದು (ಸೋಮವಾರ) ಮುಖಾಮುಖಿಯಾಗಿದೆ. ಇಲ್ಲಿಯ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಎರಡೂ ತಂಡಗಳಿಗೂ ಈ ಟೂರ್ನಿಯ ಮೂರನೇ ಪಂದ್ಯವಾಗಿದೆ. ಮೊದಲೆರಡೂ ಪಂದ್ಯಗಳಲ್ಲಿ ಈ ಬಳಗಗಳು ಸೋತಿವೆ. ತಂಡಗಳು ಇಂತಿವೆ: ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಮಾರ್ನಸ್‌ ಲಾಬುಶೇನ್‌, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಷ್ ಹ್ಯಾಜಲ್‌ವುಡ್. ಶ್ರೀಲಂಕಾ: ಕುಶಾಲ ಮೆಂಡಿಸ್ (ನಾಯಕ), ಕುಶಾಲ ಪೆರೆರಾ, ಪಥುಮ್ ನಿಸಾಂಕ, ಸದೀರ ಸಮರವಿಕ್ರಮ, ಚರಿತ ಅಸಲಂಕಾ, ಧನಂಜಯ ಡಿಸಿಲ್ವಾ, ಚಮಿಕಾ ಕರುಣಾರತ್ನೆ, ದುನಿತ್ ವೆಳಾಲಗೆ, ಮಹೀಷ್ ತೀಕ್ಷಣ, ಲಾಹಿರು ಕುಮಾರ, ದಿಲ್ಶಾನ್ ಮಧುಶಂಕಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.